ನಧೀಮ್ ಧೀಮ್ ತನ
ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದುಂಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ
ಈ ಕಣ್ಣಿನ ಕವನ ಓದೊ ಓ ಹುಡುಗ || ಪ ||
ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ
ಮಾತೊಂದ ಕೇಳುನೀ ಆಲಿಸಿ ಹಾಡೊಂದ ಹೇಳುನಿ ಹರಸಿ
ಹಾಡದಿರೊ ಹಾಡದಿರೊ ನಧೀಮ್ ಧೀಮ್ ತನ || ೧ ||
ಪ್ರೇಮದ ಸರಿಗಮ ಸ್ವರ ತಾಳದ ಕೊಳದಲ್ಲಿ
ಆಡುತ ತೆಲಾಡುತ ಜ್ವರವೇರಿಸು ಮಳೆಯಲ್ಲಿ
ಒಂದೂರಲ್ಲಿ ರಾಜ ರಾಣಿ ನೂರು ಮಕ್ಕಳ ಹೆತ್ತ ಕಥೆಗೆ
ದುಂಡು ಮುಖದ ರಾಜಕುಮಾರ ಕೋಟೆ ದಾಟಿ ಬಂದ ಕಥೆಗೆ
ನಾಯಕ ನೀನೇ ಆ ಚಂದಮಾಮ ಕಥೆಗೆ ನಾಯಕಿ ನಾ || ೨ ||
ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು
ಸೋಲುವೆ ಪ್ರತಿ ಕ್ಷಣ ನನ್ನ ಮನದಲೆ ನಾನು
ನಿದ್ದೆ ಬರದ ಕಣ್ಣಾ ಮೇಲೆ ಕೈಯಾ ಮುಗಿವೆ ಚುಂಬಿಸು ನೀ
ನಾನೆ ನಾಚಿ ನಡುಗೊ ವೇಳೆ ಮಲ್ಲೆ ಹೂವ ಮುಡಿಸೊ ಒಮ್ಮೆ
ನಾನು ಭೂಮಿ ಆವರಿಸು ಸುರಿವ ಮಳೆಯಂತೆ ನನ್ನ || ೩ ||
ಪರಿಕರಗಳು
ಸಾಲದ ಮಾಸಿಕ ಕಂತು (EMI)
ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.
ಹೆಸರು ಹುಡುಕಿ
ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.
ಕರ್ನಾಟಕ ರಾಜ್ಯ
ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!